"ಕಿರಣ ಬರೆಯುತ್ತಿದ್ದಾನೆ..." ಎಂಬ ಶೀರ್ಷಿಕೆ ಒಂದು ಐತಿಹಾಸಿಕ ಘಟನೆಯ ಮುನ್ನುಡಿ ಎಂಬ ಅರ್ಥ ಹುಟ್ಟಿಸುತ್ತದೆಯಲ್ಲವೇ? ಅದು ಶೀರ್ಷಿಕೆಯ ತಪ್ಪೇ ಹೊರತು, ಕಿರಣ ಗೀಚುವ ಅಕ್ಷರಗಳಿಗೆ ಅಷ್ಟೊಂದು ಶಕ್ತಿ ಇಲ್ಲ ಎಂಬುದು ನನಗೂ ಚೆನ್ನಾಗಿ ಗೊತ್ತು!
ನನಗೆ ಕನ್ನಡ ಪುಸ್ತಕಗಳ ಹುಚ್ಚು ಹತ್ತಿಕೊಂಡಿದ್ದು ತುಂಬ ಹಿಂದೆ.... ಕುವೆಂಪು, ಕಾರಂತ, ತೇಜಸ್ವಿಯವರಿಂದ ಹಿಡಿದು ಜಯಂತ ಕಾಯ್ಕಿಣಿಯವರ ವರೆಗಿನ ಕನ್ನಡ ಸಾಹಿತ್ಯ ಲೋಕದ ಅಮಲು ಅಂದಿನಿಂದ ಇಂದಿನವರೆಗೂ ನನ್ನನ್ನು ಕಾಡುತ್ತಿದೆ!
ಗೀಚುವ ಗೀಳು ಶುರುವಾಗಿದ್ದು ಕಾಲೇಜು ಸೇರಿಕೊಂಡಮೇಲೆ. ಬಹುಶಃ ಪ್ರತಿ ಕವಿಯ ಆರಂಭದ ಕವಿತೆಗಳು ಸುಂದರಿಯ ಸೌಂದರ್ಯದ ಸುತ್ತಲೇ ಸುತ್ತುತ್ತವೆ, ಹೆಣ್ಣಿನ ಕಣ್ಣಿನ ಆಳದಿಂದ ಹೊರಬರಲು ಅವು ಸಮಯ ತೆಗೆದುಕೊಳ್ಳುತ್ತವೆ ... ! ಅದಕ್ಕೆ ನಾನೇನೂ ಹೊರತಲ್ಲ ಬಿಡಿ ... ಅಲ್ಲಿಗೆ ನಾನು ಕವಿ ಎಂದು ಬೆನ್ನು ಚಪ್ಪರಿಸಿಕೊಂಡದ್ದಾಯಿತು :)
![]() |
ಹೆಣ್ಣ ಕಣ್ಣಿನ ಆಳವ ಅಳೆಯಬಹುದೇ ? |
title swalpa thappagide kiran , kiran channagi bareyuthiddaane
ReplyDeleteWelcome to blogger s world